Managing Director's Message
ನಮ್ಮ ತಂದೆ ಬಿ ಕೆ ನಾರಾಯಣಸ್ವಾಮಿ [ತಬಲ] ನನ್ನ ತಾಯಿ ರಾಜಮ್ಮ ರವರ ಜ್ಯೇಷ್ಠ ಪುತ್ರ ಬಿ ಎನ್ ಗೋಪಾಲಕೃಷ್ಣ ನಾದ ನಾನು ದಿನಾಂಕ: ೦೫.೦೨.೧೯೬೭ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುತ್ತೇನೆ.
ನಮ್ಮದು ಕಲಾವಿದರ ಕುಟುಂಬ. ನಾನು ಚಿಕ್ಕ ವಯಸ್ಸಿನಿಂದಲೇ ಮೃದಂಗ ಮತ್ತು ಕರ್ನಾಟಕ ಶಾಸ್ತಿçÃಯ ಸಂಗೀತ [ಹಾಡುಗಾರಿಕೆ] ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ್ದೇನೆ. ತದನಂತರದಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ತಬಲ ಮತ್ತು ಕೀಬೋರ್ಡ್ ನುಡಿಸುವುದರ ಮೂಲಕ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಲಾ ಸೇವೆಯನ್ನು ಸಲ್ಲಿಸಿರುತ್ತೇನೆ. ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ತಬಲ ಮತ್ತು ಮೃದಂಗ ತಯಾರಿಕೆ ಮಾಡುವುದನ್ನೂ ಸಹ ನಡೆಸುತ್ತಿದ್ದೆನು.
ಹಳ್ಳಿಗಳಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ತಬಲ ನುಡಿಸುವ ಸಂದರ್ಭದಲ್ಲಿ ಅಲ್ಲಿ ಕಷ್ಟ ಪಡುವ ಜನÀ ಜೀವನದ ಬಗ್ಗೆ, ರೈತರ ಬಗ್ಗೆ ಬಹಳಷ್ಟು ತಿಳುವಳಿಕೆ ಪಡೆದುಕೊಂಡೆನು. ನಾಟಕ ಮುಗಿದ ನಂತರದಲ್ಲಿ ಅಲ್ಲಿನ ರೈತಾಪಿ ಗೆಳೆಯರು ನನ್ನೊಡನೆ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಪೌರಾಣಿಕ ನಾಟಕಗಳನ್ನು ನುಡಿಸುತ್ತಾ ಕನ್ನಡ ಭಾಷೆಯ ಉಚ್ಚಾರಣೆಯನ್ನು ಕಲಿತುಕೊಂಡೆನು.
ನಾಟಕದಲ್ಲಿ ನುಡಿಸುತ್ತಿದ್ದ ನನ್ನ ತಂದೆಯವರು, ಹಿರಿಯ ಕಲಾವಿದರು, ಸ್ನೇಹಿತರು, ಸೀನ್ಸ್ ಮಾಲೀಕರು ಮತ್ತು ಮಹಿಳಾ ನಟಿಯರು ಪಡುತ್ತಿದ್ದ ಬಾಧೆಗಳನ್ನು ಹತ್ತಿರದಲ್ಲಿ ಕಂಡಿದ್ದೇನೆ. ಕಲಾವಿದರ ಏಳಿಗೆಗಾಗಿ ರಂಗಭೂಮಿ ಕಲಾವಿದರ ರಕ್ಷಣಾ ವೇದಿಕೆ ಮತ್ತು ಹಿರಿಯ ಕಲಾವಿದರು ಮತ್ತು ನುರಿತ ಕಲಾವಿದರನ್ನೊಳಗೊಂಡ ಅಖಿಲ ಕರ್ನಾಟಕ ರಂಗಭೂಮಿ ಕಲಾವಿದರ ಹಿತ ರಕ್ಷಣಾ ವೇದಿಕೆ ಸ್ಥಾಪಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಲೆ ಮತ್ತು ಕಲಾವಿದರ ಸೇವೆ ಸಲ್ಲಿಸಿರುತ್ತೇನೆ.
ಕಲಾವಿದರ ಹುಡುಕಾಟಕ್ಕೆ ಸಂಬAಧಿಸಿದ ಹಾಗೆ ಜನರು ಕುಳಿತಲ್ಲಿಯೇ ಕಲಾವಿದರನ್ನು ಬುಕ್ ಮಾಡುವ ಸಲುವಾಗಿ “ಆಲ್ ಆರ್ಟಿಸ್ಟ್ ಬುಕಿಂಗ್ ಆಪ್” ಮಾಡಿದ್ದೆನು.
“ಕರ್ನಾಟಕ ನೇಕಾರರ ಹಿತರಕ್ಷಣಾ ವೇದಿಕೆ” ಸಂಸ್ಥೆಯನ್ನು ರಚಿಸಿ ಅದರ ಅಧ್ಯಕ್ಷನಾಗಿ ಸಮುದಾಯಕ್ಕೆ ಸಂಬAಧಪಟ್ಟ ಹಾಗೆ ಸರ್ಕಾರ ಆದೇಶಿಸಿದ ಶಬ್ಧ ಮಾಲಿನ್ಯ ವಿರುದ್ಧವಾಗಿ ದನಿ ಎತ್ತಿದೆನು. ನೇಕಾರರು ನಡೆಸುತ್ತಿದ್ದ ಬಟ್ಟೆ ತಯಾರಿಕಾ ಘಟಕಗಳಿಗೆ ಸುತ್ತ ಮುತ್ತಲಿನ ಜನರು ನೇಕಾರಿಕೆಗೆ ಅಡ್ಡಿ ಪಡಿಸುತ್ತಿದ್ದು ಅವರ ವಿರುದ್ಧವಾಗಿ ಹೋರಾಟ ಮಾಡಿದ್ದೇನೆ.
ರಾಜಕೀಯ ಕ್ಷೇತ್ರದಲ್ಲಿ ನೇಗಿಲು ಹೊತ್ತ ರೈತನ ಚಿನ್ಹೆಯುಳ್ಳ ಜನತಾ ಪಕ್ಷದಲ್ಲಿ ಬೆಂಗಳೂರು ಘಟಕದ ಅಧ್ಯಕ್ಷನಾಗಿ ಎರಡು ವರ್ಷಗಳÀ ಕಾಲ ಸೇವೆಯನ್ನು ಸಲ್ಲಿಸಿದ್ದೇನೆ. ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೯೯೪ ರಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ.
ಅAದಿನಿAದಲೇ ಏನಾದರೂ ಸಮಾಜಕ್ಕೆ ನನ್ನ ಕೊಡುಗೆಯಾಗಬೇಕು ಎಂದು ಬಹಳಷ್ಟು ಯೋಚಿಸಿ ಇಂದು “ಜೆಪಿ ನ್ಯೂಸ್” ಅಂದರೆ ಜನತಾ ಪವರ್ ನ್ಯೂಸ್ ಸಂಸ್ಥೆಯನ್ನು ದಿನಾಂಕ: ೦೪.೦೭.೨೦೨೩ ಸ್ಥಾಪಿಸಿ ನಡೆಸುತ್ತಿದ್ದೇನೆ. ಇದರ ಗುರಿ ಉದ್ದೇಶಗಳು: ನೊಂದ ಜನರ, ಕಲಾವಿದರ, ವಿದ್ಯಾರ್ಥಿಗಳ, ಶೋಷಿತ ಎಲ್ಲಾವರ್ಗಗಳ ಮತ್ತು ಯುವ ಪೀಳಿಗೆಯ ದನಿಯಾಗಬೇಕು ಎಂದು ಬಯಸುತ್ತೇನೆ. ಸಮಾಜಕ್ಕೆ ಕೊಡುಗೆಯಾಗ ಬೇಕೆಂದು ಬಯಸಿರುವ ಜೆಪಿ ನ್ಯೂಸ್ ಗೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಬೆಂಬಲ ಸದಾ ಇರಲೆಂದು ಆಶಿಸುತ್ತೇನೆ.