ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೯೯೪ ರಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಅAದಿನಿAದಲೇ ಏನಾದರೂ ಸಮಾಜಕ್ಕೆ ನನ್ನ ಕೊಡುಗೆಯಾಗಬೇಕು ಎಂದು ಬಹಳಷ್ಟು ಯೋಚಿಸಿ ಇಂದು “ಜೆಪಿ ನ್ಯೂಸ್” ಅಂದರೆ ಜನತಾ ಪವರ್ ನ್ಯೂಸ್ ಸಂಸ್ಥೆಯನ್ನು ದಿನಾಂಕ: ೦೪.೦೭.೨೦೨೩ ಸ್ಥಾಪಿಸಿ ನಡೆಸುತ್ತಿದ್ದೇನೆ. ಇದರ ಗುರಿ ಉದ್ದೇಶಗಳು: ನೊಂದ ಜನರ, ಕಲಾವಿದರ, ವಿದ್ಯಾರ್ಥಿಗಳ, ಶೋಷಿತ ಎಲ್ಲಾವರ್ಗಗಳ ಮತ್ತು ಯುವ ಪೀಳಿಗೆಯ ದನಿಯಾಗಬೇಕು ಎಂದು ಬಯಸುತ್ತೇನೆ.
ನಮ್ಮ ತಂದೆ ಬಿ ಕೆ ನಾರಾಯಣಸ್ವಾಮಿ [ತಬಲ] ನನ್ನ ತಾಯಿ ರಾಜಮ್ಮ ರವರ ಜ್ಯೇಷ್ಠ ಪುತ್ರ ಬಿ ಎನ್ ಗೋಪಾಲಕೃಷ್ಣ ನಾದ ನಾನು ದಿನಾಂಕ: ೦೫.೦೨.೧೯೬೭ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುತ್ತೇನೆ. ನಮ್ಮದು ಕಲಾವಿದರ ಕುಟುಂಬ. ನಾನು ಚಿಕ್ಕ ವಯಸ್ಸಿನಿಂದಲೇ ಮೃದಂಗ ಮತ್ತು ಕರ್ನಾಟಕ ಶಾಸ್ತಿçÃಯ ಸಂಗೀತ [ಹಾಡುಗಾರಿಕೆ] ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ್ದೇನೆ. ತದನಂತರದಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ತಬಲ ಮತ್ತು ಕೀಬೋರ್ಡ್ ನುಡಿಸುವುದರ ಮೂಲಕ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಲಾ ಸೇವೆಯನ್ನು ಸಲ್ಲಿಸಿರುತ್ತೇನೆ. ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ತಬಲ ಮತ್ತು ಮೃದಂಗ ತಯಾರಿಕೆ ಮಾಡುವುದನ್ನೂ ಸಹ ನಡೆಸುತ್ತಿದ್ದೆನು.
B N Gopala Krishna
A/c no : 0682101042691
Bank : Canara Bank
Branch : Sri Ramapuram
IFSC Code: CNRB0000682